ಪುಟಗಳು

ಸೋಮವಾರ, ಜುಲೈ 21, 2014

"ಬಾಳಿಲ"ರ ಅಣಿಮುತ್ತುಗಳು


     ದಿನಾಂಕ 09/07/2014ರಂದು ನಡೆದ ಕುಂದಾಪುರ ಪ್ರೌಢಶಾಲಾ ಸಮಾಜ ವಿಜ್ಞಾನ ಪುನಶ್ಚೇತನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಶಿಕ್ಷಣ ತಜ್ಞ,ಚಿಂತಕ
ಶ್ರೀ ಹೆಚ್ ಕೃಷ್ಣಶಾಸ್ತ್ರಿ ಬಾಳಿಲ ಇವರು ಸಮಾಜ ವಿಜ್ಞಾನ ಶಿಕ್ಷಕರಿಗೆ ತಿಳಿಸಿದ ಮಾರ್ಗದರ್ಶಿ ಸೂತ್ರಗಳು.

1.ಮಾತು ಉಪದೇಶಕ್ಕೆ ಬದಲಾಗಿ ಆಚರಣೆಯಾಗಿ ಬದಲಾಗಬೇಕು.
2.ವಿವೇಚನೆ,ವಿವೇಕ ಇಲ್ಲದೇ ,ಯಾಕೆ ? ಎಂದು ಗೊತ್ತಿಲ್ಲದೆ, ಯಾವುದನ್ನೂ ಮಕ್ಕಳಿಗೆ ದಾಟಿಸಬೇಡಿ.
3.ಸಹಶಿಕ್ಷಣವೇ ಅತ್ಯಂತ ಪೂರಕವಾದ ಶೈಕ್ಷಣಿಕ ವಾತಾವರಣ.
4."ಹಿಂದಿನದನ್ನು ಮರೆಯುವುದು ಹೊಸದನ್ನು ಕಲಿಯುವುದಕ್ಕಿಂತ ಕಷ್ಟ.”
5.ತರಗತಿಯಲ್ಲಿ ಮಕ್ಕಳನ್ನು ಕೂರಿಸಿಯೇ ಪ್ರಶ್ನೆ ಕೇಳಿ.ಬದಲಾವಣೆ ಗಮನಿಸಿ.
6.ತಪ್ಪು ಕಲಿಕೆಯ ಬಾಗಿಲು ತೆರೆಯುತ್ತದೆ.
7.ಮಕ್ಕಳಲ್ಲಿ ಹಿಂಜರಿಕೆ ದೂರಮಾಡಿ.
8.Approach ಎಂದರೆ ವಸ್ತು ವಿಷಯದ (ಬೋಧನಾ ವಿಧಾನದ) ಸಮೀಪನ.
9.ಸಮಾಜ ವಿಜ್ಞಾನವೆಂದರೆ "ಗತ ಚರಿತ್ರೆಯನ್ನು ವರ್ತಮಾನದಲ್ಲಿ ಸೂಕ್ತವಾಗಿ ನಿರ್ಣಯಿಸಿ ಮುಂದುವರಿ ಎಂದರ್ಥ.
10.ಮಕ್ಕಳಲ್ಲಿ ವಿಮರ್ಶಾತ್ಮಕ ಚಿಂತನೆ ಬೆಳೆಸಿ,ಉತ್ತರಿಸುವ ಧೈರ್ಯ ಬೆಳೆಸಿ.
11.Silence doesnot guarantee any learning.ಮೌನ ಕಲಿಕೆಯನ್ನು ಖಾತ್ರಿಗೊಳಿಸದು.
12.ಇತಿಹಾಸದಿಂದ ಪಾಠ ಕಲಿಯದೇ ಇದ್ದರೆ ಅದು ಮರುಕಳಿಸುತ್ತದೆ(ನಿರ್ಣಯ ಸರಿ ಇಲ್ಲದಿದ್ದಾಗ
   ಇತಿಹಾಸ ಮರುಕಳಿಸುತ್ತದೆ.
13.ಸಮಾಜ ವಿಜ್ಞಾನ ಶಿಕ್ಷಕನಿಗೆ ಅತ್ಯಂತ ಅಗತ್ಯ -ವಿಷಯ ಪ್ರಭುತ್ವ (Subject grip)

ತರಗತಿಯಲ್ಲಿ ಸಮಾಜ ವಿಜ್ಞಾನ ಶಿಕ್ಷಕರ ಕಾರ್ಯ
1.ಅಂದಿನ ಅವಧಿಗೆ ಬೇಕಾದದ್ದನ್ನು ಮಾತ್ರ ಮೈಗೆ ಅಂಟಿಸಿಕೊಳ್ಳದೇ, ಮೈಗೂಡಿಸಿಕೊಳ್ಳಿ..
2.ಪಠ್ಯದಲ್ಲಿರುವುದನ್ನು ಮಾತ್ರ ಹೇಳಬೇಡಿ.ಹೊಸದನ್ನು ಹೇಳಿ.
3.ನಿಜವಾದ ಜ್ಞಾನ ಪಠ್ಯಪುಸ್ತಕದ ಹೊರಗೆ ಇದೆ ಎನ್ನುವುದು ನೆನಪಿರಲಿ.
4.ವಿದ್ಯಾರ್ಥಿಗೆ ಮೊದಲೇ ಪಾಠ ಓದಿಕೊಂಡು ಬರಲು ತಿಳಿಸಿರಿ.
5.ವಿದ್ಯಾರ್ಥಿಗಳಲ್ಲಿ ಬೌದ್ಧಿಕ ಸಾಮರ್ಥ್ಯ ಬೆಳೆಸಿ.
6.ತರಗತಿಗೆ ನಕಾಶೆ ತೆಗೆದುಕೊಂಡು ಹೋಗುವ ಬದಲಿಗೆ ನಾವೇ ಅದನ್ನು ಬಿಡಿಸಿದರೆ ಉತ್ತಮ.
7.ಕಲಿಯುವುದು ಹೇಗೆ ? ಎಂಬುದನ್ನು ಮೊದಲು ಕಲಿ.
8.ಮಕ್ಕಳಿಗೆ ಪರಾಮರ್ಶನ ಕೌಶಲ ಕಲಿಸಿ.
9.Self learning/Auto learning is more important.
10.Spoon feeding is ultimately leads the size of the spoon.
11.ಜ್ಞಾನ ಕಟ್ಟಿಕೊಳ್ಳುವ ಕೌಶಲ ಬೆಳೆಸಿ.
12.Social Science is a dull subject in the hands of dull teacher.
13.Text Book is a clutches(ಕ್ಲಚಸ್), teacher cannot walk.
14.Text books are the tools in the hands of the teacher.
15.Every child has a natural curiosity to learn.
16.ಮಗುವಿಗೆ ಉಸಿರಾಡಲು ಕೊಡಿ.ಕಲಿಯದಂತೆ ಮಾಡಬೇಡಿ.
17.ಮಕ್ಕಳನ್ನು ಹತ್ತಿಕ್ಕಬೇಡಿ.ಮಾತನಾಡಲು ಬಿಡಿ.
18.ನಾವು ಬೆಲ್ಲವಾದರೆ ಮಕ್ಕಳು ಸಕ್ಕರೆಯಾಗುವರು.
19.ಮಕ್ಕಳಿಗೆ intellectual stemina ಕೊಡಿ.
20,"ವಾರ್ಷಿಕೋತ್ಸವ ನಿಮ್ಮ ಶಾಲೆಯ ನಿತ್ಯೋತ್ಸವವಾಗಲಿ”.
21.ಬೋಧನೆಯಲ್ಲಿ ವೈವಿಧ್ಯತೆ ಇರಲಿ.Variety creates interest.

ಸಮಾಜ ವಿಜ್ಞಾನದಲ್ಲಿ ನಡೆಸಬಹುದಾದ(ನಡೆಸಿರುವ) ಚಟುವಟಿಕೆಗಳು
List of Activities
1.Team teaching
2.Teaching by student
3.Mono Acting
4.Auto biographical narration
5.Narration in the story form.(Ex.River)
6.Notes taking &Making
7.Reading the text with expression
8.Role play
9.ಹರಿಕಥೆ(ಕೀರ್ತನೆ)
10.ಯಕ್ಷಗಾನ
11.ತಾಳಮದ್ದಲೆ
12.Discussion
13.Interview
14.Question &answer (Student question &teachers answer)
15.Phone in programme
16.Dramatisation
17.ಪತ್ರಲೇಖನ
18.Paper ಪ್ರೆಸೆಂಟೇಷನ್
19.Songs by teacher(Any story related to history, geography
(Ex:Solar system)
20.Dance (ನೃತ್ಯರೂಪಕ)
21.Demonstration
22.Shouting Slogans
23.Puppet Show
24.Plip Chart
25.Group Discussion
26.Field Visit.
27.Play card
28. ಗ್ರಾಮ ಚಾವಡಿ
29.ಮಕ್ಕಳ ಪಂಚಾಯತ್

*ಬೆಂದು ಹೋಗಬೇಕು ಹೊರತು ,ತುಕ್ಕು ಹಿಡಿದು ಹೋಗಬಾರದು( It is better to roast out, before rust out.)


Report by-Bhagwat,ghs kedoor

ಭಾನುವಾರ, ಜುಲೈ 20, 2014

ಸಮಾಜ ವಿಜ್ಞಾನ ಪುನಶ್ಚೇತನ ಕಾರ್ಯಕ್ರಮ

                            ಸಮಾಜ ವಿಜ್ಞಾನ ಪುನಶ್ಚೇತನ ಕಾರ್ಯಕ್ರಮ

 

ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಗೋಪಾಲ ಶೆಟ್ಟಿ ಇವರಿಂದ ಕಾರ್ಯಕ್ರಮದ ಉದ್ಘಾಟನೆ

  ದಿನಾಂಕ:09/07/2014ರಂದು ಕುಂದಾಪುರ ವಲಯದ ಸಮಾಜ ವಿಜ್ಞಾನ ಶಿಕ್ಷಕರ ಒಂದು ದಿನದ ಪುನಶ್ಚೇತನ ಕಾರ್ಯಕ್ರಮವು ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸಾರ್ವಜನಿಕ ಶಿಕ್ಷಣ ಇಲಾಖೆ ಕುಂದಾಪುರ ವಲಯ  , ಸಮಾಜ ವಿಜ್ಞಾನ ವಿಷಯ ಶಿಕ್ಷಕರ ವೇದಿಕೆ ಕುಂದಾಪುರ ವಲಯ ,ಸರಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರ (ಪ್ರೌಢಶಾಲಾ ವಿಭಾಗ)&ರೋಟರಿ ಕ್ಲಬ್ ಕುಂದಾಪುರ ಇವರ ಸಹಯೋಗದಲ್ಲಿ,  ಸರಕಾರಿ ಪದವಿ ಪೂರ್ವ ಕಾಲೇಜಿನ   ಲಕ್ಷ್ಮೀ ನರಸಿಂಹ ಕಲಾ ಮಂದಿರದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾತನಾಡಿದ ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಗೋಪಾಲ ಶೆಟ್ಟಿ ಇವರು  ವಿಷಯ ಸಂಪನ್ಮೂಲ ಚಟುವಟಿಕೆಗೆ ಶುಭ ಹಾರೈಸಿದರು.ರೋಟರಿ ಕ್ಲಬ್ ವತಿಯಿಂದ ಈ ವರ್ಷ "ಲಿಟರಸಿ'ಆಧಾರಿತ ಕಾರ್ಯಕ್ರಮಕ್ಕೆ ಹೆಚ್ಚಿನ ನೆರವಿನ ಭರವಸೆ ನೀಡಿದರು. ರೋಟರಿ ಕ್ಲಬ್ ಕುಂದಾಪುರ ಇದರ ಅಧ್ಯಕ್ಷರಾದ ಮನೋಜ್ ಇವರು  ಈ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಕರ ತರಬೇತಿ ಕಾರ್ಯಕ್ರಮಗಳಿಗೆ ಸಂಪೂರ್ಣ ಸಹಕಾರದ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಶ್ರೀ ಭಾಸ್ಕರ್ ಜಿ ಶೇಟ್ ಇವರು ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಉದಯ್ ಗಾಂವಕರ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿ ತರಗತಿಯಲ್ಲಿ ಮಗುವಿನ ಭಾಗವಹಿಸುವಿಕೆ ಮುಖ್ಯವಾಗಿದ್ದು ಇದಕ್ಕಾಗಿ NCF-2005ರ ಆಧಾರದಲ್ಲಿ ಶೈಕ್ಷಣಿಕ ಕಾರ್ಯಕ್ರಮಗಳ ಸಾಧ್ಯತೆ ಬಗ್ಗೆ  ಮಾಹಿತಿ ನೀಡಿದರು.   ಶಿಕ್ಷಣ ತಜ್ಞ ಶ್ರೀ  H  ಕೃಷ್ಣಶಾಸ್ತ್ರಿ ಬಾಳಿಲ ಇವರು ಸಮಾಜ ವಿಜ್ಞಾನ ಪುನಶ್ಚೇತನ ಕಾರ್ಯದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಉಡುಪಿ ಜಿಲ್ಲಾ ಸಮಾಜ ವಿಜ್ಞಾನ ವಿಷಯ ವೇದಿಕೆ ಕಾರ್ಯದರ್ಶಿ,ಸರಕಾರಿ ಪ್ರೌಢಶಾಲೆ ಕೋಣಿ ಇಲ್ಲಿನ ಸಮಾಜ ವಿಜ್ಞಾನ ಸಹಶಿಕ್ಷಕರೂ ಆಗಿರುವ ಶ್ರೀ  ಸದಾನಂದ  ಬೈಂದೂರು ಇವರು ಸ್ವಾಗತಿಸಿ, ನಿರೂಪಿಸಿದರು.

ಶ್ರೀ ಉದಯ ಕುಮಾರ್ ಶೆಟ್ಟಿ ಸಹಶಿಕ್ಷಕರು ಸಂಜಯ ಗಾಂಧಿ ಪ್ರೌಢಶಾಲೆ ಅಂಪಾರು ಇವರು ವಂದಿಸಿದರು. ತಾಲೂಕಿನ ವಿವಿಧ ಪ್ರೌಢಶಾಲೆಗಳಿಂದ 50ಕ್ಕೂ ಹೆಚ್ಚು ಸಮಾಜ ವಿಜ್ಞಾನ ಶಿಕ್ಷಕರು ಭಾಗವಹಿಸಿದ್ದರು.

ಎಡದಿಂದ ಬಲಕ್ಕೆ:ಶ್ರೀ ಭಾಸ್ಕರ್ ಶೇಟ್(ಉಪಪ್ರಾಂಶುಪಾಲರು,ಸ.ಪ.ಪೂ.ಕುಂದಾಪುರ),ಶ್ರೀ ಮನೋಜ್(ರೋಟರಿ ಅಧ್ಯಕ್ಷರು),ಶ್ರೀ ಗೋಪಾಲ ಶೆಟ್ಟಿ(ಕ್ಷೇತ್ರ ಶಿಕ್ಷಣಾಧಿಕಾರಿಗಳು),ಶ್ರೀ ಕೃಷ್ಣಶಾಸ್ತ್ರಿ ಬಾಳಿಲ

ನಂತರ ನಡೆದ ಪುನಶ್ಚೇತನ ಕಾರ್ಯದಲ್ಲಿ ಸಮಾಜ ವಿಜ್ಞಾನ ಶಿಕ್ಷಕರ ತರಗತಿ ಬೋಧನೆ&ವಿಷಯ ಪ್ರಭುತ್ವದ ಬಗ್ಗೆ ಶ್ರೀ ಕೃಷ್ಣಶಾಸ್ತ್ರಿ ಬಾಳಿಲ ಇವರು ಸಾಕಷ್ಟು ಮಾಹಿತಿ ನೀಡಿದರು.ಕಾರ್ಯಕ್ರಮದ ಎರಡನೇ ಅವಧಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಛೇರಿ ಉಡುಪಿ ಇಲ್ಲಿನ ಶಿಕ್ಷಣಾಧಿಕಾರಿ ಶ್ರೀ ಅಶೋಕ್ ಕಾಮತ್ ಇವರು ಹತ್ತನೇ ತರಗತಿಯ ಬದಲಾದ ಪರೀಕ್ಷಾ ಪದ್ಧತಿ ಬಗ್ಗೆ &ಮುಂದಿನ ದಿನದಲ್ಲಿ ಹೆಚ್ಚಿನ ತರಬೇತಿಯ ಬಗ್ಗೆ  ಮಾಹಿತಿ ನೀಡಿದರು.


ಸಂಪನ್ಮೂಲ ವ್ಯಕ್ತಿಯೊಂದಿಗೆ ಶಿಕ್ಷಕರು.

ವರದಿ:ಭಾಗ್ವತ್
ಸ.ಶಿ.ಸ.ಪ್ರೌ.ಶಾ.ಕೆದೂರು